ಇಂಡಿಯಾ…
ಈ ಪತ್ರ ಬರಿತಾಯಿರೋ ನನ್ನ ಹೆಸರು ನಿರ್ಭಯಾ… ನಾನ್ಯಾರು ಅಂತ ನೆನಪಾಯ್ತಾ? ಅರೇ! ಅದೆಂಗೆ ಮರೀತಿರಾ ಹೇಳಿ, ನೆನಪಾಗಿರಬೇಕಲ್ವಾ! ಅದೇ ೨೦೧೨ರಲ್ಲಿ ಡೆಲ್ಲಿಲಿ ಹೋಗ್ತಾಯಿದ್ದ ಬಸ್ ನಲ್ಲಿ ನನ್ನ ರೇಪ್ ಮಾಡಿದ್ರಲಾ, ಆ ಹೀನ ಕೃತ್ಯಕ್ಕೆ ಬಲಿಯಾದವಳೇ ನಾನು.
ಇಂಡಿಯಾ ಇತ್ತೀಚಿಗೆ ನೀನು ನಾನಿರೋ ಜಾಗಕ್ಕೆ ತುಂಬಾ ಜನರನ್ನ ಕಳಸ್ತಾಯಿದಿಯಾ ಗುಡ್!! ಮೊನ್ನೆ ಅಷ್ಟೇ ಸ್ವರ್ಗದಲ್ಲಿ ಒಂದ್ ಹೊಸ ಹುಡ್ಗಿನಾ ಫ್ರೆಂಡ್ ಮಾಡ್ಕೊಂಡೆ,ಹೆಸರು ಏನಂತ ಕೇಳಿದೆ ಅದಕವಳು ಮನಿಷಾ ವಾಲ್ಮೀಕಿ ಅಂತ ಹೇಳಿದ್ಲು,ಪಾಪಾ ಇಲ್ಲಿಗೆ ಹೊಸಬಳು ಅವ್ಳು, ಯಾಕೋ ತುಂಬಾ ಸೈಲೆಂಟ್ ಆಗಿ ಕೂತಿರ್ತಾಳೆ ಏನೋ ಗೊತ್ತಿಲ್ಲಾ, ನೀವೇನಾದ್ರು ಮಾಡಿದ್ರಾ ಅವಳಿಗೆ? ನನಿಗೆ ಬಂದಿರೋ ಸುದ್ದಿ ಪ್ರಕಾರ ಅವಳನ್ನ ರೇಪ್ ಮಾಡಿ ಅವಳ ನಾಲಿಗೆ ಕತ್ತರಿಸಿದ್ದಾರೆ ಅಂತೆ, ನಿಜಾನಾ? ನಾಲಿಗೆ ಕತ್ತರಿಸಿದಾಗ ಆ ಹೆಣ್ಣು ಜೀವ ಎಷ್ಟು ನರಕಯಾತನೆ ಅನುಭವಿಸಿರಬಹುದಲ್ವಾ? ನಿನ್ನ ಗಂಡು ಮಕ್ಳು ಹೆಣ್ಣನ್ನ ಆರಾಧಿಸೋ ಹೊಸ ಬಗೆ ಇದೇನಾ ಇಂಡಿಯಾ? ನಿನ್ನ ನೆನಸ್ಕೊಂಡ್ರೆ ಪಾಪಾ ಅನ್ಸುತ್ತೆ ಇಂಡಿಯಾ ನನಗೆ, ನಾವಂತ್ರು ಸತ್ತೋಗಿದಿವಿ(ಸಾರಿ ಸಾಯ್ಸಿದಿರಾ),ನನ್ನಂತೆ ಭಾರತದಲ್ಲಿರುವ ನನ್ನೆಲ್ಲ ಸೋದರಿಯರು ತುಂಬಾ ಭಯದಲ್ಲಿದ್ದಾರೆ,ನಮ್ಮನ್ನಂತ್ರು ನಾವು ರಕ್ಷಿಸಿಕೊಳ್ಳೋಕಾಗಲಿಲ್ಲ atleast ಅವರನ್ನಾದ್ರೂ ರಕ್ಷಿಸು ಪ್ಲೀಸ್.
ದುಃಖದ ಸಂಗತಿ ಏನಪ್ಪಾ ಅಂದ್ರೆ,ನಮ್ಮ ಹೆಸರುಗಳೆಲ್ಲ ರಾಜಕೀಯ ಅಜೆಂಡಾಗಳಾಗಿ ಬಿಟ್ಟಿದಾವೆ, ನಿಜಾ ಅಲ್ವಾ? ಅಯ್ಯೋ ಕೇಳೋದು ಮರೆತೆ ಬಿಟ್ಟಿದ್ದೆ, ಇನ್ನೂ ಕ್ಯಾಂಡಲ್ ಮಾರ್ಚ್ (candle march) ಮಾಡಿಲ್ವಾ? ಹಾಗೊಂದು ವೇಳೆ ಮಾಡಿದ್ರೂ ದಯಮಾಡಿ ೮ ಘಂಟೆಯೊಳಗೆ ಮುಗಿಸಿಬಿಡಿ,ಯಾಕಂದ್ರೆ ಹೆಣ್ಣು ಮಕ್ಳು ತಮ್ಮ ತಮ್ಮ ಮನೆ ಸೇರ್ಕೊಬೇಕು,ಇಲ್ಲಾ ಅಂದ್ರೆ ಅವ್ರು ಅತ್ಯಾಚಾರಕ್ಕೆ ಬಲಿಯಾಗಬಹುದು.
ನೆನಪಿದ್ಯಾ, ನಾನು ಚಿಕಿತ್ಸೆಗಂತ ಸಿಂಗಾಪುರಗೆ ಹೋಗಿದ್ದೆ, ನನ್ನ ಪುಣ್ಯ ನಾನಲ್ಲೇ ಸತ್ತೋದೆ, ಭಾರತದಲ್ಲಿ ಸತ್ತಿಲ್ಲ ಅನ್ನೋದೇ ಖುಷಿ, ಯಾಕಂದ್ರೆ ನಿಮ್ಮ ಜನ ಶವಗಳನ್ನೂ ರೇಪ್ ಮಾಡ್ತಾರೆ ಅನ್ನೋದನ್ನ ಕೇಳ್ಪಟ್ಟಿದೀನಿ.
ಇಂಡಿಯಾ ನಿನ್ನ ಅಜ್ಞಾನ ನೋಡಿ ದುಃಖ ಪಟ್ಟಿದೀನಿ,ನಿನ್ನ ಕಾನೂನು ನೋಡಿ ಬೇಸತ್ತುಹೋಗಿದಿನಿ, ನಿನ್ನ ಜನರನ್ನ ನೋಡಿ ಭಯಪಟ್ಟಿದೀನಿ, ಈ ಭಯ ಬರೀ ನನ್ನದಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ಯುವತಿಯ ಭಯ. ಕಡೆದಾಗಿ ನಿನಗೊಂದು ಮಾತು ಹೇಳೋದಕ್ಕೆ ಇಷ್ಟಪಡ್ತೀನಿ, ನಿನ್ನ ಮಕ್ಳ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆದಿದೆ,ದಯಮಾಡಿ ಇನ್ನಾದ್ರೂ ಎಚ್ಛೆತ್ಕೋ, ಕಾಲ ಮೀರಿ ಹೋಗಿದೆ ಅಂತ ನನಿಗೆ ಗೊತ್ತು, ಆದ್ರೂ ನೀನು ಎಚ್ಛೆತ್ಕೋತಿಯಾ ಅಂತ ಹೇಳ್ತಿದೀನಿ. ಸ್ವರ್ಗದಲ್ಲಿ already ತುಂಬಾ ಜನರನ್ನ ಕಳ್ಸಿದೀಯಾ ಇಲ್ಲಿ ತುಂಬಾ over crowd ಆದ್ರೆ, ಕೆಲವೊಂದಿಷ್ಟು ಜನರನ್ನ ನಾನು ಭೂಮಿಗೆ ನಿನ್ನ ಮಗಳ ರೂಪದಲ್ಲಿ,ಸೋದರಿ ರೂಪದಲ್ಲಿ, ತಾಯಿ ರೂಪದಲ್ಲಿ ವಾಪಸ್ ಕಳಸ್ತೀನಿ, ಇವರನ್ನಾದ್ರೂ ಚೆನ್ನಾಗಿ ನೋಡ್ಕೋ, ಇಲ್ಲಾ ಅವರು ನಿನ್ನ ಕಣ್ಣೆದುರಿಗೆ ಅತ್ಯಾಚಾರಕ್ಕೊಳಗಾದ್ರೆ ನೀನು ಬದಲಾಗಬೇಕಂತ ಆಗ ನಿನಗರಿವಾಗುತ್ತದೆ.
ಇಂತಿ ನಿನ್ನ ಮಗಳು
ನಿರ್ಭಯಾ