ಪ್ರಕೃತಿಯ ಸಂದೇಶ
ವಿಜ್ಞಾನ ತಂತ್ರಜ್ಞಾನಗಳು ಎತ್ತರೆತ್ತರ ಬೆಳೆಯುತ್ತಿವೆ
ಪ್ರಕೃತಿ ಪರಿಸರಗಳು ದಿನೇದಿನೇ ಬದಲಾಗುತ್ತಿವೆ ||
ದಾರಿಯ ಇಕ್ಕೆಲದಿ ಮಾವು ಹುಣಿಸೆ ಮರಗಳು
ಕಲರವದಿ ಅಲ್ಲಿ ವಿರಮಿಸೋ ಬಾನಾಡಿಗಳು
ಬೀಸುವ ತಂಗಾಳಿಯ ಮಧುರ ಸುಗಂಧಗಳು
ಸೌಂದರ್ಯ ಆಸ್ವಾದನೆಯ ಸಂತಸದ ಕ್ಷಣಗಳು ||1||
ಮಾನವರು ಪ್ರಕೃತಿ ಪ್ರೇಮಿಗಳಾಗಿದ್ದ ದಿನಗಳು
ಸಂಚರಿಸುತ್ತಿದ್ದವು ನಿರ್ಭಯದಿ ಖಗಮೃಗಗಳು
ಪಂಚ ತತ್ವಗಳ ಮಲಿನತೆ ಮಿತವಿದ್ದ ದಿನಗಳು
ಸಮತೋಲನವ ಕಾಪಾಡಿದ ನಡೆನುಡಿಗಳು ||2||
ಮಾರ್ಗ ಕಲ್ಪಿಸುವ ಹೆಸರಲಿ ನಶಿಸಿದ ಮರಗಳು
ಕಾರ್ಖಾನೆಗಳು ಹೊರಸೂಸುವ ವಿಷಾನಿಲಗಳು
ಅಭಿವೃಧ್ದಿಯ ಪಥದಲಿ ಅನೇಕ ಬದಲಾವಣೆಗಳು
ಮನುಜರ ಅತಿಲಾಲಸೆಗೆ ಪ್ರಕೃತಿ ಬದಲಾದಳು ||3||
ಅಧಿಕವಾದ ವರ್ಷಧಾರೆ ಸುನಾಮಿ ಪ್ರವಾಹಗಳು
ಚಂಡಮಾರುತ ಬಿಸಿಲಿನ ತಾಪ ಕಾಡ್ಗಿಚ್ಚುಗಳು
ಮೊಳಗಿಹವು ಎಚ್ಚರಿಕೆಯ ಕರೆಗಂಟೆ ಸೂಚನೆಗಳು
ಮನುಕುಲಕೆ ಒಂದು ಅವಕಾಶ ನೀಡಿದೆೆ ಬದಲಾಗಲು||4||
ಪೂರ್ಣಿಮ ಭಗವಾನ್
Voting Section
Click on a star to vote.
0 / 5. Vote count: 0
No votes so far! Be the first to rate this post.