ಸುಳಿಗಾಳಿಯ ಸಂಚಲನವೊಂದು
ಬದಲಾವಣೆಯ ತರಬೇಕಿದೆ
ಮೂಡ ಮನುಜರ ಉಸಿರಿನೊಲ್ಲಕ್ಕು
ಚಿಂತನೆಯಲ್ಲಿ ಪ್ರಬುದ್ಧರನ್ನಾಗಿ ಮಾಡಬೇಕಿದೆ
ಅತ್ಯಾಚಾರದಿ ಹೆಣ್ಣುಗಳ ಹಿಂಸಿಸುವ
ಮೃಗಮಾನವರ ಹೃದಯದಿ ಹೊಕ್ಕು
ಮಾತೃತ್ವದ ಸೂಲು ತುಂಬಬೇಕಿದೆ
ಕಂದಮ್ಮಗಳ ಉಸಿರನ್ನಡಗಿಸುವ
ಕೈಗಳಿಗೆ ಪವನ ಸೋಕಿ ಪಿತೃತ್ವದ ಚಿತ್ತ ಆವರಿಸಬೇಕಿದೆ
ಸುಳಿಗಾಳಿಯೊಂದು ಬದಲಾವಣೆಯ
ಸಂಚಲನವೊಂದು ತರಬೇಕಿದೆ
ಬಡವರ ಕೂಗಿನ ಎಲರಿಗೆ ಧನಿಕರ ಅಂತರಂಗ
ತೆರೆದುಕೊಳ್ಳಬೇಕಿದೆ
ಕುಳ್ಳಿರಿಸಿ ಊಟವಿಡುವ ಬದಲು
ಕೆಲಸವಿಲ್ಲದ ಕೈಗಳಿಗೆ ಉದ್ಯೋಗ ನೀಡಿ
ಸ್ವಾಭಿಮಾನದಿ ಬದುಕು ಕಟ್ಟಿಕೊಳ್ಳುವಂತಾಗಬೇಕಿದೆ
ಆಶ್ವಾಸನೆಯು ಬರೀ ಮಾತಾಗಾದೆ
ಕಷ್ಟವಾದರೂ ಈಡೇರಿಸುವ ಛಲ ಮೂಡಿಸಬೇಕಿದೆ
ಆಪಾದನೆ ಆರೋಪಗಳ ದೊಂಬರಾಟದ
ಮನೋರಂಜನೆ ಕೊಡದೆ
ಜನರತ್ತ ಚಿತ್ತ ಹರಿಸುವ
ಬದಲಾವಣೆಯ ಸುಳಿಗಾಳಿಯೊಂದು
ಮನುಜರ ಹೊಕ್ಕು ಸಂಚಲನವ ತರಬೇಕಿದೆ
ನ್ಯಾಯವದುವೇ ನಿಧನವಾಗುವ ಮೊದಲೇ
ಸಂತ್ರಸ್ತರಿಗೆ ಸಿಗುವಂತಾಗಬೇಕಿದೆ
ಒಡಲ ಜೀವ ಕಳೆದುಕೊಂಡ ಸಂಬಂಧಗಳಲ್ಲಿ
ನ್ಯಾಯ ಸಿಕ್ಕಿ ನಗುವಾದರೂ ಅವರ
ಅಧರಗಳಲ್ಲಿ ಮೂಡಬೇಕಿದೆ
ನ್ಯಾಯಾಲಯದ ಮೆಟ್ಟಿಲಗಳನ್ನೇರಿ ಇಳಿದು
ದಣಿದ ಜೀವಗಳಿಗೆ ಉಸಿರುಗಟ್ಟುವ ಮುಂಚೆಯೇ
ಅವರಿಗಾದ ನಷ್ಟವ ತುಂಬಿಸುವ ನಿಯಮ
ಬರಬೇಕಿದೆ
ಕಣ್ಣೀರಿನಲ್ಲಿ ಕಾನೂನು ಕರಗದೆ ಕಂಗಳಲ್ಲಿ
ಪ್ರಜ್ವಲಿಸುವ ದೇದೀಪ್ಯಮಾನವಾಗಿ ಬೆಳಗಿಸುವ
ತಂಗಾಳಿಯೊಂದು ಹಾಯ್ದು ಮಾನವರ
ಅಂತರಂಗದಲ್ಲಿ ಸುಳಿದು ಸಂಚಲನವ ತರಬೇಕಿದೆ
ಪ್ರಕೃತಿಯಲ್ಲಿ ಬೆರತು ಅರಿತು ತನ್ನಂತೆಯೇ
ನಿಸರ್ಗವೂ ಕೂಡ ಎಂದು ಭಾವಿಸಬೇಕಿದೆ
ಮರಗಳನ್ನ ಉರುಳಿಸದೆ ಕಾಡುಗಳನ್ನು
ನೆಲಸಮ ಮಾಡಿ ರೆಸಾರ್ಟ್ ಎಬ್ಬಿಸದೆ
ವನ್ಯಜೀವಿಗಳಿಗೂ ಬದುಕು ಕಟ್ಟಿಕೊಡಬೇಕಿದೆ
ನದಿಗಳನ್ನು ಉಳಿಸಿ ಮುಂದಿನ ಪೀಳಿಗೆಯವರಿಗೂ
ಪ್ರಕೃತಿಯನ್ನು ಸ್ವಚ್ಛವಾಗಿ ಕೊಡಬೇಕಿದೆ
ನಿಸರ್ಗ ನಮಗೆಷ್ಟು ಸ್ವಚ್ಛವಾಗಿ ವರದಾನ ಮಾಡಿದೆಯೋ
ಅಷ್ಟೇ ಶುದ್ಧವಾಗಿಟ್ಟುಕೊಳ್ಳಬೇಕಿದೆ
ಪ್ರಕೃತಿಯನ್ನು ರಕ್ಷಿಸಿ ಉಳಿಸಿಕೊಂಡು ಬೆಳಸಿಕೊಂಡು
ಹೋಗುವ ಸುಳಿಗಾಳಿಯೊಂದು ಬದಲಾವಣೆಯ
ಸಂಚಲನವ ತರಬೇಕಿದೆ .
Voting Section
Click on a star to vote.
0 / 5. Vote count: 0
No votes so far! Be the first to rate this post.