0
(0)
ಬಯಕೆಯ ಬೆನ್ನೇರಿ
ಬಯಕೆಯ ಬೆನ್ನೇರಿ ಸಾಗುತಿದೆ ಜೀವನ ರಥವು
ಛಲದಿ ಮುನ್ನುಗ್ಗಿ ಸಾಧಿಸಲು ಸತತ ಪ್ರಯತ್ನವು
ದೇಹದಿ ಕಸುವಿರುವವರೆಗೆ ನಿಲ್ಲಿಸದ ದುಡಿತವು
ಗುರಿ ತಲುಪಲೇ ಬೇಕೆಂಬ ಮನದ ತುಡಿತವು
ಉತ್ಸಾಹದ ಗರಿಗೆದರಿ ಅದಮ್ಯ ಚೇತನವು
ಬಯಕೆಯ ಬೀಜ ಕುಡಿಯೊಡೆದು ಬೆಳೆಯುವುವು
ಸಂಭ್ರಮದ ಜೀವನೋತ್ಸಾಹಕೆ ಧನವಲ್ಲ ಮುಖ್ಯವು
ಸಂತೃಪ್ತಿಯ ಹೊನಲಲ್ಲವದು
ಉಳ್ಳವರ ನಿವಾಸವು
ಅತಿಯಾಗಿ ಶೇಖರಿಸಿ ಇಡುವುದು ತರವಲ್ಲವು
ಬಯಕೆಯ ಬೆನ್ನೇರಿ ನಿಸ್ವಾರ್ಥದ
ಗೂಡೊಳಗೆ ಸ್ವಾರ್ಥವು
ಹಂಚಿದಷ್ಟೂ ವರ್ಧಿಸುವುದು ಜ್ಞಾನ ಭಂಡಾರವು
ಪಾಲಿಸಲು ನೀತಿ ನಿಯಮ ನಿಷ್ಠೆ ನಿಸ್ವಾರ್ಥವು
ಬೇಕಿಹುದು ನಾವೆಲ್ಲ ಒಂದೇ ಎಂಬ ಮನೋಭಾವವು
ಮನದ ಒಪ್ಪು ಓರಣ ಅದ್ಭುತ ಅಲಂಕಾರವು
ಪೂರ್ಣಿಮ ಭಗವಾನ್.
Voting Section
Click on a star to vote.
0 / 5. Vote count: 0
No votes so far! Be the first to rate this post.