ಹುಣ್ಣಿಮೆ ಚಂದಿರ
ಹುಣ್ಣಿಮೆ ಬೆಳಕಿನ ಇರುಳಿನಲೊಂದು ಕನಸೊಂದು ಬಿದ್ದಿತ್ತು.
ಹುಣ್ಣಿಮೆ ಹೇಗೆ ಆಗುತ್ತೆ?ಅಂತ ಯೋಚನೆ ಬಂದಿತ್ತು.
ಆಗ ನಮ್ಮ ಶಾಲೆ ಶಿಕ್ಷಕರು ಕಲಿಸಿದ ಪಾಠ ನೆನಪಿಗೆ ಬಂದಿತ್ತು.
ಇದಕ್ಕೆ ಕಾರಣ ನಮ್ಮ ಭೂಮಿಯ ಚಲನೆ ಎಂದು ತಿಳಿದಿತ್ತು. ||1||
ಪೌರ್ಣಿಮೆ ಚಂದಿರ ರಾತ್ರಿಗೆ ತಂಪನು ತಂದಿತ್ತು.
ಆಕಾಶದೆಡೆಗೆ ನೋಡುವ ಕೌತುಕ ನನಗಾಯ್ತು.
ನಕ್ಷತ್ರದ ನಡುವೆ ರಾಜನಂತೆ ಚಂದಿರ ಕಂಡಿತ್ತು.
ಅವನ ಕುರಿತು ಯೋಚಿಸಲೊಂದು ಅವಕಾಶ ಸಿಕ್ಕಿತ್ತು.||2||
ತಿಂಗಳಿಗೊಮ್ಮೆ ಯಾಕೆ ಹೀಗೆ?ಎಂಬ ಪ್ರಶ್ನೆಯು ಕಾಡಿತ್ತು.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದಿತ್ತು.
ಸೂರ್ಯನ ಬೆಳಕು ಚಂದ್ರನ ಮುಖವ ಹೊಳೆವಂತೆ ಮಾಡಿತ್ತು.
ಇದರಿಂದ ಚಂದ್ರನ ಅರ್ಧ ಮುಖವು ನಮಗೆ ಕಂಡಿತ್ತು.||3||
ಚಂದ್ರನ ತೋರಿಸಿ ಊಟ ಮಾಡಿಸಿದ ಅಮ್ಮ ಎಲ್ಲಿ ಹೋಯ್ತು?
ನೆನಪಿನ ಬುತ್ತಿಯ ಬಿಟ್ಟು ದೂರ ಹೊರಟು ಹೋಯ್ತು.
ನನಗಾಗಿ ಚಂದ್ರನ ಕರೆಸಿದ ಅಮ್ಮನ ನೆನಪಾಯ್ತು.
ಚಂದ್ರನಿಗಿಂತ ಅಮ್ಮನೇ ಮುಖವೇ ಸುಂದರವಾಗಿತ್ತು.||4||
ಬೆಳ್ಳಿಯ ಚಂದ್ರನ ಕಾಣಲು ಮನವು ಬಯಸಿತ್ತು.
ಅಜ್ಜಿ ಹೇಳಿದ ಚಂದ ಮಾಮನ ಕಥೆಯ ನೆನಪಾಯ್ತು.
ಗಣಪನ ಡೊಳ್ಳು ಹೊಟ್ಟೆ ನೋಡಿ ಚಂದ್ರ ನಕ್ಕಿತ್ತು.
ಸಿಟ್ಟಿನ ಗಣಪ ಹೊಳೆವ ಚಂದ್ರನಿಗೆ ಶಾಪ ಹಾಕಿತ್ತು.||5||
ಚಂದ್ರನ ಬೆಳಕು ಹುಣ್ಣಿಮೆ ರಾತ್ರಿಯಲಿ ಮುದವ ತಂದಿತ್ತು.
ಬೆಳ್ಳಿ ತಟ್ಟೆ ಹೋಲುವ ಚಂದ್ರ ರಾತ್ರಿಗೆ ಖಳೆಯ ತಂದಿತ್ತು.
ಆತನ ಚಲುವ ಬಣ್ಣಿಸಲೊಂದು ಸಮಯ ಸಿಕ್ಕಿತ್ತು.
ಹೀಗೆ ನಮ್ಮ ಚಂದ್ರ ಕವಿಗಳಿಗೆ ಸ್ಫೂರ್ತಿಯಾಗಿತ್ತು.||6||
ಚನ್ನಮ್ಮ S. S. ✍️
Voting Section
Click on a star to vote.
5 / 5. Vote count: 7
No votes so far! Be the first to rate this post.