Kannada Poetry

Antaranga

ವೇಷ ಧರಿಸಬೇಡ ಮರೆಮಾಚಬೇಡ
ನೋಡಬೇಕು ನಾ ನಿನ್ನ ಅಂತರಂಗದ
ತಿಳಿಗೊಳದಲಿ ನನ್ನ ಮುಖವ
ಹೋಳಿಯ ಸುಗ್ಗಿಯ ಸುಡುಬಿಸಿಲಿನಲ್ಲಿ
ನಡೆದು ಬರಬೇಡ ಸುಟ್ಟೀತು
ನನ್ನಂತರಂಗ ..
ಯೋಜನೆ ನೂರಾದರೇನು ಸುಳಿದಾಡು
ನನ್ನ ಸುತ್ತ ಚೈತ್ರದ ಸುಮಗಳು
ಸೂಸುವ ಸುಗಂಧವಾಗಿ
ಆ ಸ್ವರ್ಗದ ಅನುಭೂತಿ ಸಾಕು
ನನ್ನ ಬದುಕು ಬಣ್ಣದ ಕಾಮನಬಿಲ್ಲು

ನನ್ನ ಪರಿಧಿ

ಸಂವೇದನೆ   ತುಂಬಿದ ಈ   ಭಾವಯಾನದಲ್ಲಿನಮ್ಮ   ಅಸ್ತಿತ್ವವೇ ಒಂದು   ಮೂಲ  ಮಂತ್ರವಾಗಿರಲಿ ಜೀವನದ   ಏಳುಬೀಳುಗಳ  ಸುಖ ದುಃಖಗಳ ಸರಿದೂಗಿಸಿ ನಡೆಯುವದೇ ದಾಂಪತ್ಯ

ನನ್ನ ಪರಿಧಿ

ನನ್ನ ಮೊದಲ ಗಜಲ್ ಕತ್ತಲಾದರೂ ಕಾಯುವೆ ನಾ ನಿನಗಾಗಿ ಉತ್ತರಕ್ಕಾಗಿ ಹುಡುಕುತ್ತಿರುವೆ ನಾ ನಿನಗಾಗಿ ಪ್ರೀತಿಯ ಜೇನಹನಿಯ ತಂದಿರುವೆ ಒಲವಿನ ಬತ್ತಳಿಕೆಯಿಂದ ನಾ ನಿನಗಾಗಿ ಆಕಾಶದ ಚುಕ್ಕಿಯ ಎಣಿಸುತ ಕಾಲಕಳೆದೆ ಆ ನೀರವ ರಾತ್ರಿಯಲಿ ನಾ ನಿನಗಾಗಿ ಮರೆತುಹೋದ ನೆನಪು ಮರಳಿ ಬಂದು ಬಳಲುತಿರುವೆ ನಾ ನಿನಗಾಗಿ ಬಂದು ಸೇರಿಕೊ ಎನ್ನ, ಸುಧೆಯ ಹರಿಸಲು ಕಾಯುತಿರುವೆ ನಾ ನಿನಗಾಗಿ ಸುಶಿ

ಬಯಕೆಗಳ ಪುನರ್ಜೀವ

ಬಯಕೆಗಳ ಪುನರ್ಜೀವ ಬಯಕೆಗಳ ಹೊತ್ತು ಬಾನಾಡಿಯಲ್ಲಿ ಬೆಳ್ಳಕ್ಕಿಯಾಗಿ ಹಾರುತಲಿರುವೆ ಕಾಣಲೊಲ್ಲದು ಎಲ್ಲೂ ಹಸಿರೆಲೆ ಕಾಡು-ಮೇಡು ವಿರಮಿಸಲು ಕೆಲಹೊತ್ತು ಬಯಕೆಗಳ ಮೂಟೆಯ ಅಲ್ಲೇ ಬಿಸುಟಾಗ ಕಂಡಿತೊಂದು ಮಾಯಾನಗರಿ ದೂರದಲ್ಲಿ ಪುಳಕಗೊಂಡ ಮನದಿ ಹತ್ತಿರ ಸುಳಿದಾಗ ನಿಂತಿದ್ದೆ ನಾನು ಬರಡು ಭುವಿಯಲ್ಲಿ! ಆದರೂ ಛಲ ಬಿಡದೆ ಎದ್ದು ನಿಂತೆ ನಾ ಕಾಣದ ಹಸಿರೆಲೆಯ ಅರಸಿ ಮತ್ತೆ ನಿಂದು ಕಣ್ಣ ತುಂಬ ಕನಸಾ ಹೊತ್ತು ನನ್ನೆಲ್ಲಾ ಶಕ್ತಿಯ ಮೀರಿ ಮತ್ತೆ ಮೇಲೇರಿದೆ ನಾ ಬಾನಾಡಿಯ ಬೆಳ್ಳಕ್ಕಿಯಾಗಿ ಹರ್ಷದಿ ಚೀರಿದೆ ಜಗತ್ತನ್ನು ಗೆಲ್ಲುವ …

ಬಯಕೆಗಳ ಪುನರ್ಜೀವ Read More »

ಜೀವಿಸಿಬಿಡು ಬದುಕಿದಷ್ಟು ದಿನ

ನಾವು ಯಾವಾಗಲೂ ಗುನುಗುವೆವು ಪಟ್ಟ ಕಷ್ಟಗಳ ಎಲ್ಲರ ಮುಂದೆ… ಇಂದಿನ ಸುಖವ ಮರೆತು!!!! ಮಾಳಿಗೆಯ ಮೇಲೆ ನಿಂತು ಯೋಚಿಸುವೆ ಏಕೆ? ಬರುವ ಗಾಳಿಯೂ ಕದ್ದು ನಾಲಿಗೆಯ ಚಾಚಿ ದಬ್ಬೀತು ಕೆಳಗೆ!!! ನಮಗಷ್ಟೆ ದೇವರಿತ್ತ ವರ ಇನ್ನೊಬ್ಬರಿಗೆ ಶಾಪ ಹಾಕುವುದ! ನೋಡಾ ನೊಂದು ಬೆಂದರೂ ಪ್ರಾಣಿಗಳು ಯಾವೊತ್ತೂ ಹಾಕಲಿಲ್ಲ ಶಾಪ!! ಭೂಮಿ ಈಗ ಸ್ವಚ್ಛಂದವಾಗಿ ಹಾಡುತಿದೆ ಯುಗಾದಿಯ ಹಾಡ!ಅದು ಮರೆತೆಹೋಯಿತು ಅನುಭವಿಸಿದ ಬರಗಾಲದ ದಿನಗಳ!!! ಪ್ರತಿ ಮರವೂ ಹೇಳುವುದು ಹೊಸ ಸಂಗೀತವ. ಏರುತಿದೆ ದಿಬ್ಬದ ಮೇಲೆ ಜಗದ ಪರಿವೆಯಿಲ್ಲದೇ …

ಜೀವಿಸಿಬಿಡು ಬದುಕಿದಷ್ಟು ದಿನ Read More »

ನೆನಪು

ನೆನಪು…ಮಾಗಿಯ ಚಳಿಗೆಮಾಗಿದ ಹಣ್ಣೆಲೆಗಳುಉದುರಿ ಹಸಿಚಿಗುರುಚಿಗುರಿ ನಗುವದುಪ್ರಕೃತಿ ಸಹಜಪ್ರತಿ ದಿನ ನಿನ್ನನೆನಪಿನ ಬಳ್ಳಿ ಚಿಗುರಲುಬೇಕಿಲ್ಲ ಮೈಮನದ ಮಾಗುವಿಕೆಪ್ರೀತಿಯ ಒಸರೊಂದೇ ಸಾಕು

ಪ್ರೀತಿ ಬಯಕೆ

ಅವಳ ಕನಸಿಗೋ ಮಿತಿಯಿಲ್ಲದ ಸೆಳೆತ ಅವನೆಂದರೆ ಕೇವಲ ನೆಪವಷ್ಟೆ. ಸರಳ ಸುಂದರ ಬದುಕು ಅವನದೇ ಆಯ್ಕೆ ಪ್ರೀತಿಗೆಂದೂ ಇಲ್ಲ ಕೊರತೆ. ಅವಳ ಬಯಕೆಗಳೋ ಗುರಿಯಿಲ್ಲದ ತಿರುವು ಮುರುವಿನ ದಾರಿ ಆದರೂ ಅವನ ಜೀವ ಹಂಬಲಿಸುವುದು ನೈಜ ಪ್ರೀತಿ ಪ್ರತೀ ಭಾರಿ…. 💕 ~ ಸುದೀಪ್ ಮಲ್ನಾಡ್

Scroll to Top