Stories

Nano Stories 0 (0)

“ಅಮ್ಮಾ, ದಯವಿಟ್ಟು ಸಹಾಯ ಮಾಡಿ, ತಪ್ಪು ತಿಳಿಯಬೇಡಿ. ನಾನು ಭಿಕ್ಷುಕಿಯಲ್ಲ. ನನ್ನ ಮಗುವಿನ ಆರೋಗ್ಯಕ್ಕೋಸ್ಕರ, ಭಿಕ್ಷೆ ಬೇಡಿ ಬಂದ ಹಣದಿಂದ ಪ್ರಸಿದ್ಧ ದೇವಾಲಯದ ದೇವರ ದರ್ಶನ ಮಾಡುವೆನೆಂದು ಹರಕೆ ಹೊತ್ತಿರುವೆ” ಎಂದು ಅಂಗಲಾಚಿದ ಆ ಮಹಿಳೆಯ ಕೈಗೆ ನೂರು ರೂಪಾಯಿ ಕೊಟ್ಟಳು ಸರಿತಾ. ಅದೇ ದಿನ, ದೇವಿ ದೇವಸ್ಥಾನಕ್ಕೆ ಹೋಗಿದ್ದ ಸರಿತಾಳನ್ನು ಕರೆದ ಅರ್ಚಕರು “ತಗೊಳ್ಳಿ ಅಮ್ಮ, ದೇವಿಯ ಪ್ರಸಾದ.  ಈ ದಿನ ನಿಮಗೆ ಕೊಡಲು ದೇವಿಯ ಪ್ರೇರಣೆಯಾಗಿದೆ” ಅಂತ ರೇಶ್ಮೆ ಸೀರೆಯೊಂದನ್ನು ಕೈಗಿತ್ತರು. ಇದು ಪ್ರತಿಫಲವೇ?

#truelove #loveneverFades

Love never Fades 0 (0)

My first love always be my last love, though may not together. Your name will always be on my lips, whatever it takes. Love never Fade.

ಹುಡುಕಾಟವೇನೆ ಜೀವನ!? 0 (0)

ಪ್ರಶ್ನೆ ಎಂದರೆ ಅದಕ್ಕೊಂದು ಉತ್ತರವಿರಲೇಬೇಕೇ? ಹಾಗಾದರೆ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲವೇ? ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಈ ಭೂಮಿಯಲ್ಲಿ ನಿಗೂಢವಾಗಿ ಅಡಗಿವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದರೂ, ಉತ್ತರಕ್ಕೆ ಹತ್ತಿರವೆನಿಸುವ, ಉತ್ತರ ರೂಪದ ಉತ್ತರ ಸಿಗಬಹುದು, ಸಿಗದೆಯೂ ಇರಬಹುದು. ಇಂತಹ ಅತ್ಯಪರೂಪದ ಪ್ರಶ್ನೆ “ಬದುಕು” ಎಂದರೆ ಬಹುಶಹ ತಪ್ಪಾಗಲಾರದು.ಬದುಕೇ ಒಂದು ದೊಡ್ಡ ಪ್ರಶ್ನೆ, ಒಂದರ್ಥದಲ್ಲಿ Syllabus ಇಲ್ಲದೆ ಪರೀಕ್ಷೆ ಬರೆದ ಹಾಗೆ, ಈ ಪರೀಕ್ಷೆಯಲ್ಲಿ ಪೂರ್ವಭಾವಿ ಸಿದ್ಧತೆಗಳಿಲ್ಲ. ಜೀವನದುದ್ದಕ್ಕೂ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಸಾಗುವುದೇ ಜೀವನದ ವ್ಯಾಖ್ಯಾನ. ಒಂದು ರೀತಿ ಉತ್ತರ ಹುಡುಕುವುದೇ ಒಂದು ದೊಡ್ಡ ಸಾಧನೆ, ಉತ್ತರ ಸಿಕ್ಕಿತೂ ಎನ್ನುವ ಖಾತರಿಯೂ ಇರುವುದಿಲ್ಲ, ಒಂದು ವೇಳೆ ಉತ್ತರ ಸಿಕ್ಕರೂ, ಸಿಕ್ಕ ಉತ್ತರ ಸರಿಯಾಗಿರುವುದೆನ್ನುವುದು ಖಾತರಿಯಿರುವುದಿಲ್ಲ.ನಮಗೆ ಸಿಕ್ಕ ಉತ್ತರ ಎಲ್ಲರಿಗೂ ಸರಿ ಅನ್ನಿಸಬೇಕು ಅಂತಾನೂ ಇಲ್ಲ, ನನ್ನ ಉತ್ತರವೇ ಸರಿ ಎನ್ನುವ ಭ್ರಮೆಯಲ್ಲಿರುವುದೂ ಸರಿಯಲ್ಲ. ನಮಗೆ ಸಿಕ್ಕ ಉತ್ತರ ಮುಂದೊಂದು ದಿನ ತಪ್ಪಾಗಿರಬಹುದು ಮತ್ತು ನಮಗೆ ದೊರೆತ ಉತ್ತರದಿಂದ ನಾವು ಕೀರ್ತಿ ಮತ್ತು ಯಶಸ್ಸುಗಳನ್ನು ಪಡೆಯಲೂಬಹುದು. ಉತ್ತರ ಸರಿಯಿರಲಿ, ತಪ್ಪಿರಲಿ. ಸಿಗಲಿ, ಸಿಗದಿರಲಿ.ದಾರಿ ಸುಲಭದ್ದಾಗಿರಲಿ, ಕಠಿಣದ್ದಾಗಿರಲಿ. ಆದರೆ ಉತ್ತರ ಹುಡುಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಉತ್ತರ ಸುಲಭವಾಗಿ ದೊರೆಯುವುದೆಂದು ವಾಮಮಾರ್ಗ ಹಿಡಿಯಬಾರದು, ಉತ್ತರವನ್ನು ಅರಸುವ ಮಾರ್ಗ ಸನ್ಮಾರ್ಗದ್ದಾಗಿರಬೇಕು ಮತ್ತು ಶ್ರದ್ಧೆಯಿಂದ ಕೂಡಿರಬೇಕು. ಈ ರೀತಿ ಜೀವನದ ಹಲವು ಘಟ್ಟಗಳಲ್ಲಿ ಬಂದೊದಗಿದ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋದಾಗ ನಮ್ಮಲ್ಲಿನ ದ್ವಂದ್ವಗಳು ನಿವಾರಣೆಯಾಗುತ್ತವೆ.

Habba 0 (0)

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ನಾಗರ ಪಂಚಮಿ , ವರಮಹಾಲಕ್ಷ್ಮಿ ಹಬ್ಬ. ಹಬ್ಬಎಂದೊಡನೆ ಥಟ್ಟನೆ ನೆನಪಾಗುವುದು ಗೆಳತಿ ಪದ್ಮಾವತಿಯ ನೆನಪು .ಪಿ.ಯು.ಸಿ ಯಿಂದ ಗೆಳೆತನ .ನಮ್ಮಲ್ಲಿ ಮೊದಲು ಮದುವೆಯಾದದ್ದೇ ಅವಳಿಗೆ . ನನ್ನ ಓದು ಮುಂದುವರೆದಿತ್ತು .ಇದ್ದುರಲ್ಲೇ ಗಂಡನ ಮನೆ .ಮದುವೆಯಾದ ಮೇಲೂ ಗೆಳತಿಯರಿಂದ ದೂರವಾಗಿರಲಿಲ್ಲ .ಅದರಲ್ಲೂ ಹಾಸ್ಟೆಲ್ ನಲ್ಲಿ ಇರುತ್ತಿದ್ದ ನನ್ನ ಮೇಲೆ ವಿಶೇಷ ಪ್ರೀತಿ .ಮನೆಯಲ್ಲಿ ಏನೇ ಹಬ್ಬ ,ಹುಣ್ಣಿವೆ ,ಅಮವಾಸೆ , ಇದ್ದರೂ ಕೂಡಾ ನನಗೆ ಊಟದ ಕ್ಯಾರಿಯರ್ ತಂದು ಕೊಟ್ಟು ಹೋಗುತ್ತಿದ್ದಳು …

Habba 0 (0) Read More »

ಆದರ್ಶಪ್ರಾಯರು 0 (0)

ರಜನಿಯ ಮೊಬೈಲ್ ಫೋನ್ ರಿಂಗಣಿಸುತ್ತಿತ್ತು. ಅಡುಗೆ ಕೆಲಸದಲ್ಲಿ ಮುಳುಗಿ ಹೋಗಿದ್ದಳವಳು. “ಲೇ ರಜನಿ, ನಿನ್ನ ಗೆಳತಿ ಅಂಬಿಕಾ ಕಾಲ್” ಅನ್ನುತ್ತಾ ಮೊಬೈಲನ್ನು ರಜನಿಯ ಕೈಗಿತ್ತರು ಅವಳ ಗಂಡ ಸುಧಾಮ. ಕೈ ಒರೆಸಿಕೊಂಡು ಫೋನ್ ಕರೆ ಸ್ವೀಕರಿಸಿದ ರಜನಿ “ಏನೇ ಅಂಬಿಕಾ, ಇಷ್ಟು ಹೊತ್ತಿಗೆ ಕರೆ ಮಾಡಿದ್ದೀಯಾ?ಏನು ವಿಶೇಷ? ಮನೆಯಲ್ಲಿ ಎಲ್ಲರೂ ಸೌಖ್ಯ ತಾನೇ?” ಅಂತ ಕೇಳಲಾರಂಭಿಸಿದಳು. “ಒಂದೊಂದೇ ಪ್ರಶ್ನೆ ಕೇಳು ಮಾರಾಯ್ತಿ. ನೀನು ವಾಟ್ಸಾಪ್ ನೋಡುವುದೂ ಇಲ್ಲ. ನಾನು ನಿನ್ನೆ ಒಂದು ಹುಡುಗಿ ಫೋಟೋ ಕಳಿಸಿದ್ದೆ. ಫೋಟೋ …

ಆದರ್ಶಪ್ರಾಯರು 0 (0) Read More »

Scroll to Top