Short Stories

Nano Stories

“ಅಮ್ಮಾ, ದಯವಿಟ್ಟು ಸಹಾಯ ಮಾಡಿ, ತಪ್ಪು ತಿಳಿಯಬೇಡಿ. ನಾನು ಭಿಕ್ಷುಕಿಯಲ್ಲ. ನನ್ನ ಮಗುವಿನ ಆರೋಗ್ಯಕ್ಕೋಸ್ಕರ, ಭಿಕ್ಷೆ ಬೇಡಿ ಬಂದ ಹಣದಿಂದ ಪ್ರಸಿದ್ಧ ದೇವಾಲಯದ ದೇವರ ದರ್ಶನ ಮಾಡುವೆನೆಂದು ಹರಕೆ ಹೊತ್ತಿರುವೆ” ಎಂದು ಅಂಗಲಾಚಿದ ಆ ಮಹಿಳೆಯ ಕೈಗೆ ನೂರು ರೂಪಾಯಿ ಕೊಟ್ಟಳು ಸರಿತಾ. ಅದೇ ದಿನ, ದೇವಿ ದೇವಸ್ಥಾನಕ್ಕೆ ಹೋಗಿದ್ದ ಸರಿತಾಳನ್ನು ಕರೆದ ಅರ್ಚಕರು “ತಗೊಳ್ಳಿ ಅಮ್ಮ, ದೇವಿಯ ಪ್ರಸಾದ.  ಈ ದಿನ ನಿಮಗೆ ಕೊಡಲು ದೇವಿಯ ಪ್ರೇರಣೆಯಾಗಿದೆ” ಅಂತ ರೇಶ್ಮೆ ಸೀರೆಯೊಂದನ್ನು ಕೈಗಿತ್ತರು. ಇದು ಪ್ರತಿಫಲವೇ?

Scroll to Top